Skip to main content

Posts

ಅಮ್ಮ

Recent posts

Reading Dan Brown for the first time!

I love thrillers! Hearing a lot  about Dan Brown, I wanted to try my hands out on his books since a long time now.  But as every reader knows, everytime I finished a book, the choice of picking up the next read out of hundreds of them from the longggg TBR pile became a difficult task!  Finally, after finishing my exams and a long time since taking a break from the reading journey, finally picked up a Dan Brown novel and it was The Digital Fortress! Title of the Book: Digital Fortress Author: Dan Brown Genre: Techno Thriller My rating: ♦♦♦♦🔶 Backdrop: --------------- Why Digital Fortress first? As written earlier, I have seen and heard a lot about Brown's books. Out of those, I especially wanted to start with any of these:       - The Da Vinci Code because this is said to be one of his best.      - Angels and Demons because so many booktubers adore this!      - Digital Fortress  after I watched Shrishty Sharma,  ...

ಕರ್ವಾಲೊ | ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಈ ಕಾದಂಬರಿಯ ಮೂಲಕ ಮೂಡಿಗೆರೆಯ ಪರಿಸರ-ಕಾನನಗಳ ಒಮ್ಮೆ ವಿಹರಿಸೋಣ ಬನ್ನಿ..

ಪುಸ್ತಕ: ಕರ್ವಾಲೊ  ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ  ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ.. English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ‌ ಓದಿಕೊಂಡು‌ ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ... ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ! ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ...

Sakhya: a short story

Sakhya Friendship is a unique bonding! 'Friends' are the humanised form of trust, affection and care, all dwelled in one.  Friends are a family! These buddies are the ones who are always with each other, for each other. This is the story of two such friends Sakhi and Maithri from a local high school in a village called Sakhpur.  Sakhi was studying in high-school when she met Maithri. They both were new students in the class. With new faces all around the class and difficulty in studying languages, Maithri approached Sakhi, the girl in the same boat, for help. They both helped each other, talked about overcoming their situation and eventually became friends. Close friends.  They started sharing everything; be it food, family matters, school, gossip, every damn  thing with each other. Even their families knew each other now. At times, Sakhi even felt like going to Maithri's home and spending time with her, doing combined studies, playing and all.  They...

ಆದಿಕವಿಗರ್ಪಣೆ...

ರತ್ನಾಕರನೆಂಬ ಕಡು ನಿರ್ದಯಿಯಾಗಿ ಬೆಳೆದು, ನಾರದ ಮುನಿಗಳಿಂದ ಪರಿವರ್ತಿತರಾಗಿ,  ರಾಮ ಮಂತ್ರವ ಹಿಂದುಮುಂದಾಗಿ ಪಠಿಸುತ್ತಲೇ ಜೀವನವನ್ನು ಪಾವನವಾಗಿಸಿಕೊಂಡ,  ಆದಿಕಾವ್ಯವ ಜಗಕ್ಕೆ ನೀಡಿದ,  ಗರ್ಭವತಿ ಸೀರಜಾತೆಗೆ ಆಶ್ರಯವ ನೀಡಿ ಪಿತನಂತೆ ಸಲಹಿದ, ಮಹಾಮಹಿಮ ಮಹರ್ಷಿ ವಾಲ್ಮೀಕಿಗಳು..  ಅದೆಷ್ಟು ಕಠೋರ ಹೃದಯ! ರತ್ನಾಕರನೆಂಬ ಹೆಸರು ಕೇಳಿದರೇ ಬೆಚ್ಚಿ ಹೋಗುವಷ್ಟು! ಕಾಡದಾರಿಯಲ್ಲಿ ಬರುವ ಜನರಿಗೆ ಭೀತಿ ಹುಟ್ಟಿಸಿ ಸುಲಭವಾಗಿ ಅವರ ಬಳಿಯಿದ್ದುದನೆಲ್ಲಾ ಸುಲಿದು, ತಾನೇನೋ ಆರಾಮವಾಗಿ ಪಾಪ ಕಟ್ಟಿಕೊಳ್ಳುತ್ತಿದ್ದ. ಹೆಸರಿಗೆ, ಮಾಡುವುದು ಯಾರ ಸಲುವಾಗಿ? ತನ್ನವರಿಗಾಗಿ!  ಅಲ್ಲಿಗೆ, ಸದಾ ನಾರಾಯಣನ ನಾಮಧ್ಯಾನ ಮಾಡುವ ನಾರದ ಮುನಿಗಳ ಭೇಟಿ! ತನ್ನವರಿಗಾಗಿ ಇದನ್ನೆಲ್ಲಾ ಮಾಡುತ್ತಿರುವೆನೆಂದು ಅಷ್ಟು ಗಡದ್ದಾಗಿ ಹೇಳುತ್ತಿರುವೆಯೆಲ್ಲಾ, ನೀನು ಮಾಡಿದ ಈ ಪಾಪಗಳಲ್ಲಿ ನಿನ್ನವರೆಷ್ಟು ಪಾಲನ್ನು ಹೊರುತ್ತಾರೆ? ಎಂದು ಮುಹರ್ಷಿ ನಾರದರು ಕೇಳಿದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ, ಅದು ಹೇಗೆ ಅವರ ಬಾಳಿನ ದಿಕ್ಕನ್ನೇ ಸಂಪೂರ್ಣ ಬದಲಾಯಿಸಿಬಿಟ್ಟಿತು!! ರಾಮಲೀಲಿಯೇ ಸರಿ.  'ರಾಮ' ಎಂದು ಸರಿಯಾಗಿ ಉಚ್ಛರಿಸಲರಿಯದಷ್ಟೂ ತುಂಬಿಕೊಂಡಿದ್ದ ಪಾಪವು, ರಾಮಧ್ಯಾನಮಾತ್ರದಿಂದಲೇ ಸಂಪೂರ್ಣ ನಶಿಸಿ ಪುಣ್ಯಾತ್ಮರೇ ಆಗಿ ಜಗತ್ತಿಗೇ ಮಹಾಕಾವ್ಯವ ನೀಡುವಂತಾಯಿತು ಮಹರ್ಷಿ ವಾಲ್ಮೀಕಿಗಳು. ತನ್ನ ತನುವನ್ನೇ ಹುತ್ತವಾವರಿಸಿಕೊಂ...

ಕಾಣದ ದೇವರ ಕಾಣುವ ಸ್ವರೂಪ ಧರಿಣಿಯೊಳವತರಿಸಿದ ದಿನ!!! #ಶ್ರೀಗುರುವರ್ಧಂತ್ಯೋತ್ಸವ

ಪರಮಪೂಜ್ಯ ಶ್ರೀಸಂಸ್ಥಾನದವರ ವರ್ಧಂತ್ಯೋತ್ಸವದ ಪುಣ್ಯದಿನ! ಸದಾ ಶಾಂತ ಭಾವ...ಶಿಷ್ಯರೆಲ್ಲರ ಮನದ ದುಗುಡಗಳ ಕಳೆವ ಆ ಹಸನ್ಮುಖ..✨ ಶಿಷ್ಯರೆಲ್ಲರ ನೋವಿಗೆ ಕಿವಿಯಾಗುವ, ದುಃಖವ ನೀಗಿಸುವ, ಸದಾ ಗುರಿ ತೋರಿ ಮುನ್ನಡೆಸುವ ಕಾಣದ ದೇವರ ಕಾಣುವ ಸ್ವರೂಪ... ಸಾಮಾನ್ಯರ ಕಲ್ಪನೆಗೂ ಮೀರಿದ ಮುಷ್ಠಿಭಿಕ್ಷೆ, ಕಾಮದುಘಾ ಯೋಜನೆಗಳಿಂದ ಹಿಡಿದು ಗೋಸ್ವರ್ಗ, ವಿಶ್ವವಿದ್ಯಾಪೀಠಗಳಂಥ ಬೃಹತ್ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕಿಳಿಸಿದ ಮಹಾತ್ಮರು.. ನಮ್ಮ ಕುಲಗುರುಗಳು ✨🙏🏻 ತಮಗಾರಿಹರು ಸಾಟಿ? ಹೇ ಗುರುವರ.. ನಮ್ಮ ಭಾಗ್ಯದಿಂದ ಕುಲಗುರುಗಳಾಗಿ ದೊರೆತ ನಮ್ಮೆಲ್ಲರ ಪಾಲಿನ ಆರಾಧ್ಯ,ನಮ್ಮ ಪ್ರೀತಿಯ ಶ್ರೀಸಂಸ್ಥಾನದವರ ಚರಣಕಮಲಗಳಲ್ಲಿ ಶರಣಾಗಿ ಭಕ್ತಿಯಿಂದ ಪೊಡಮಡುವೆ🙏🏻  ಇನ್ನಷ್ಟು ಮತ್ತಷ್ಟು ಸೇವೆಯನೊಪ್ಪಿಸುವ ಶಕ್ತಿ ನೀಡಿರೆಮಗೆ.. ಧನ್ಯ ಧನ್ಯ ಈ ದಿನ! 🙏🏻 ತಮ್ಮನ್ನು ಕುಲ ಗುರುಗಳಾಗಿ ಪಡೆದುದು ನಮ್ಮ ಮಹಾಭಾಗ್ಯದ ಭಾಗ್ಯ, ಶ್ರೀಸಂಸ್ಥಾನದವರ ವರ್ಧಂತಿಯಂದು ಬೇಡುವ ಶುಭಾಶೀರ್ವಾದಗಳು 🙏🏻🙏🏻  #ನಮ್ಮ_ಪ್ರೀತಿಯ_ಶ್ರೀಸಂಸ್ಥಾನ - ಶ್ರೀಪದ

A Monk who sold his Ferrari | Robin Sharma | Book Review

Off late, I was more onto fiction, and this is mostly the first english non-fiction (self help) I read recently. It changed my thinking towards reading non-fiction and I will definitely read more of non-fiction from now on.   The Monk Who Sold His Ferrari is written by Robin Sharma, a motivational speaker and bestselling author from Canada. The writing style is in a way of conversation between two people. Julian Mantle, a famous lawyer, comes to India after a heart attack, to find his true self. He learns the importance of spirituaity, wisdom and transforms himself into a much healthier and happy man after learning the ancient techniques followed by the great Sages of Sivana. He later returns to his country, to spread the awareness among the people of the west.  This book is filled with positive thoughts, importance of spirituality, it gives the techniques to know yourself better. What I liked about the book is, some phrases which are difficult to understand or remember...

ಅಜ್ಜನ ಅಚ್ಚಳಿಯದ ನೆನಪಿನಲ್ಲಿ...

🌸12th April, 1934 - 12th December, 2002🌸        ಇಂದು, ಸಾಹಿತ್ಯ ಶಿರೋಮಣಿ ನೀರ್ಪಾಜೆ ಭೀಮ ಭಟ್ ಅವರ 87 ನೇ ಜಯಂತ್ಯುತ್ಸವ✨   ಅಜ್ಜ ತೀರಿಹೋದಾಗ ನನಗೆ ಎರಡೇ ವರ್ಷ!! ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂಥರಾ ಅಚ್ಚಳಿಯದ ಅಜ್ಜನ ನೆನಪು.. ನಾ ಪುಟ್ಟವಳಿದ್ದಾಗ "ನೀ ಬರೆಯಕ್ಕು ಪುಳ್ಳಿ...ತುಂಬಾ ಬರೆಯಕ್ಕು" ಎಂದು ನನ್ನನ್ನು ಬಳಿ ಕರೆದು ಯಾವಾಗಲೂ ಹೇಳುತ್ತಿದ್ದರೆಂದು ಎನ್ನಮ್ಮ ಈಗಲೂ ನೆನಪಿಸಿಕೊಳ್ಳುತ್ತಾರೆ.  ಇಂದು ನಾನು ಬರವಣಿಗೆಯತ್ತ  ಪುಟ್ಟ ಹೆಜ್ಜೆಯಿಡುತ್ತಿದ್ದೇನೆಂದರೆ, ಅದಕ್ಕೆ ಕಾರಣ ಅಜ್ಜನಿಂದಲೇ ಬಳುವಳಿಯಾಗಿ ಬಂದ 'ಸಾಹಿತ್ಯ ಪ್ರೇಮ' ಎಂದರೆ ತಪ್ಪಾಗಲಾರದೇನೋ!!  ನೀವು ನಮ್ಮ ಮನದ ಮೂಲೆಯಲ್ಲಿ ಸದಾ ನೆಲೆಯಾಗಿರುವಿರಿ..  ಸದಾ ನಿಮ್ಮ ಸ್ಮರಣೆಯಲ್ಲಿ....  ನಿಮ್ಮ ಪುಳ್ಳಿ...🙏🏻🙏🏻 - ಶ್ರೀಪದ 🌸