ಪುಸ್ತಕ: ಕರ್ವಾಲೊ
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ..
English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ ಓದಿಕೊಂಡು ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ...
ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ!
ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ ಶಿಷ್ಯ, ಕರಿಯಪ್ಪ ಎಂಬ ಶಿಕಾರಿ ಕಮ್ ಬಿರ್ಯಾನಿಗೇ ಜನಪ್ರಿಯನಾದ ಅಡುಗೆಯವ, ಫೋಟೋಗ್ರಾಫರ್ ಪ್ರಭಾಕರ, ಎಂಕ್ಟ ಎಂಬ ಹಾವು ಹಿಡಿಯುವವ, ಹೀಗೆ ಒಬ್ಬರಿಂದ ಒಬ್ಬರು ತಮ್ಮದೇ ಆದ ವಿಶೇಷತೆ ಹೊಂದಿರುವ ಪಾತ್ರಗಳು!!
ಜೇನುಹುಳು, ಜೇನುತುಪ್ಪದ ಹಲವು ವಿಧ, ಕೃಷಿ, ಹುಳು-ಹುಪ್ಪಟೆಗಳ ತೊಂದರೆಯಿಂದ ರಕ್ಷಣೆ, ವಿವಿಧ ರೀತಿಯ ಹಲವು ಪ್ರಾಣಿಗಳ ಬಗ್ಗೆ ಮಾಹಿತಿಯನ್ನೂ ಜೊತೆಜೊತೆಯಲ್ಲೇ ನೀಡಲಾಗಿದೆ.
ಜೇನುಹುಳಗಳಿಂದ ಕಚ್ಚಿಸಿಕೊಳ್ಳಬೇಕಾದ ಸಂದರ್ಭ,
ಪುಟ್ಟ ಪುಟ್ಟ ಖುಷಿ, ಸಣ್ಣ ಸಣ್ಣ ಮನಸ್ತಾಪ, ಇದ್ದಕ್ಕಿದ್ದಂತೆ ಎದುರಾಗುವ ತಲೆನೋವು-ಜಂಜಾಟಗಳು, ಇದರ ಮಧ್ಯೆ ಬರುವ ಬೈಗುಳಗಳು, ಹಾಸ್ಯಮಯ ಸಂಭಾಷಣೆಗಳ ಬಗ್ಗೆ ಎರಡು ಮಾತಿಲ್ಲ! ಹಾಸ್ಯ ಪಾತ್ರದಲ್ಲಂತೂ ಮಂದಣ್ಣನೇ ಹೀರೋ!
ಮೂಡಿಗೆರೆಯ ಜೇನು ಸೊಸೈಟಿಯ ಜೇನುತುಪ್ಪದಿಂದ ಆರಂಭವಾಗಿ, ಕಾಡಿನಲ್ಲಿ ಸಿಗುವ ಅಪರೂಪದ ಹಾರುವ ಓತಿಯ ಬಗ್ಗೆ ತಿಳಿದು ಅದನ್ನು ಹಿಡಿಯುವವರೆಗೆ, ಮಲೆನಾಡ ಮೂಡಿಗೆರೆಯ ಸುತ್ತಲಿನ ಹಳ್ಳಿ ಕಾಡುಗಳ ಸುಂದರ ಪರಿಸರದಲ್ಲೆಲ್ಲ ನಮ್ಮನ್ನೊಮ್ಮೆ ವಿಹಾರ ಮಾಡಿಸಿ ಬರುವ ಈ ಕಥೆ, ಕಣ್ಣ ಮುಂದೆಯೇ ಈ ಘಟನೆಗಳು ಆಗುತ್ತಿವೆಯೇನೋ ಎಂಬಂತೆ ಚಿತ್ರಿಸಲಾದ ಅತ್ಯಪೂರ್ವ ನಿರೂಪಣೆಯ ವೈಖರಿ, ಪರಿಸರ ವಿಜ್ಞಾನವನ್ನು ಕೂಡಿಕೊಂಡ ತೇಜಸ್ವಿಯವರ ಅಮೋಘ ಕಲ್ಪನೆ - ವರ್ಣನಾತೀತ!
ಹೀಗೆ ತುಂಬಾ ಇಷ್ಟಪಟ್ಟು ಕರ್ವಾಲೊ ಕಾದಂಬರಿ ಓದಿ...ಅಲ್ಲಲ್ಲ, ಕೇಳಿ ಮುಗಿಸಿದೆ. ಉಮೇಶ್ ಎಸ್. ಎಸ್. ಅವರ ಅಚ್ಚುಕಟ್ಟಾದ, ಸ್ಪಷ್ಟ ವಾಚನವನ್ನು ಸ್ಮರಿಸಲೇಬೇಕು.
ಪದಗಳಲ್ಲಿ ಎಷ್ಟೇ ವರ್ಣಿಸಿದರೂ ಜಿಲೇಬಿಯ ರುಚಿ ತಿಂದ ಮೇಲೇ ತಿಳಿಯವುದಲ್ಲವೇ..? ಹಾಗಾಗಿ, ನೀವೂ ಇದುವರೆಗೆ ಓದಿರದಿದ್ದರೆ ಪುರ್ಸೊತ್ತು ಮಾಡಿ ಓದಿ ನೋಡಿ, ಒಮ್ಮೆ ಬೇರೆಯೇ ಒಂದು ಲೋಕಕ್ಕೆ ಹೋಗಿಬರೋಣ....
ಚೆಂದ
ReplyDeleteಕಣ್ಣಿಗೆ ಕಟ್ಟುವ ಚಿತ್ರಣವನ್ನೊಳಗೊಂಡ ಬರಹ..
ReplyDeleteBari laikaidu baraddu.
ReplyDelete