Skip to main content

ಕರ್ವಾಲೊ | ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಈ ಕಾದಂಬರಿಯ ಮೂಲಕ ಮೂಡಿಗೆರೆಯ ಪರಿಸರ-ಕಾನನಗಳ ಒಮ್ಮೆ ವಿಹರಿಸೋಣ ಬನ್ನಿ..

ಪುಸ್ತಕ: ಕರ್ವಾಲೊ 
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ 

ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ..
English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ‌ ಓದಿಕೊಂಡು‌ ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ...

ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ!
ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ ಶಿಷ್ಯ, ಕರಿಯಪ್ಪ ಎಂಬ ಶಿಕಾರಿ ಕಮ್ ಬಿರ್ಯಾನಿಗೇ ಜನಪ್ರಿಯನಾದ ಅಡುಗೆಯವ, ಫೋಟೋಗ್ರಾಫರ್ ಪ್ರಭಾಕರ, ಎಂಕ್ಟ ಎಂಬ ಹಾವು ಹಿಡಿಯುವವ, ಹೀಗೆ ಒಬ್ಬರಿಂದ ಒಬ್ಬರು ತಮ್ಮದೇ ಆದ ವಿಶೇಷತೆ ಹೊಂದಿರುವ ಪಾತ್ರಗಳು!!

ಜೇನುಹುಳು, ಜೇನುತುಪ್ಪದ ಹಲವು ವಿಧ, ಕೃಷಿ, ಹುಳು-ಹುಪ್ಪಟೆಗಳ ತೊಂದರೆಯಿಂದ ರಕ್ಷಣೆ, ವಿವಿಧ ರೀತಿಯ ಹಲವು ಪ್ರಾಣಿಗಳ ಬಗ್ಗೆ ಮಾಹಿತಿಯನ್ನೂ ಜೊತೆಜೊತೆಯಲ್ಲೇ ನೀಡಲಾಗಿದೆ.
ಜೇನುಹುಳಗಳಿಂದ ಕಚ್ಚಿಸಿಕೊಳ್ಳಬೇಕಾದ ಸಂದರ್ಭ,
ಪುಟ್ಟ ಪುಟ್ಟ ಖುಷಿ, ಸಣ್ಣ ಸಣ್ಣ ಮನಸ್ತಾಪ, ಇದ್ದಕ್ಕಿದ್ದಂತೆ ಎದುರಾಗುವ ತಲೆನೋವು-ಜಂಜಾಟಗಳು, ಇದರ ಮಧ್ಯೆ ಬರುವ ಬೈಗುಳಗಳು, ಹಾಸ್ಯಮಯ ಸಂಭಾಷಣೆಗಳ ಬಗ್ಗೆ ಎರಡು ಮಾತಿಲ್ಲ! ಹಾಸ್ಯ ಪಾತ್ರದಲ್ಲಂತೂ ಮಂದಣ್ಣನೇ ಹೀರೋ!

ಮೂಡಿಗೆರೆಯ ಜೇನು ಸೊಸೈಟಿಯ ಜೇನುತುಪ್ಪದಿಂದ ಆರಂಭವಾಗಿ, ಕಾಡಿನಲ್ಲಿ ಸಿಗುವ ಅಪರೂಪದ ಹಾರುವ ಓತಿಯ ಬಗ್ಗೆ ತಿಳಿದು ಅದನ್ನು ಹಿಡಿಯುವವರೆಗೆ, ಮಲೆನಾಡ ಮೂಡಿಗೆರೆಯ ಸುತ್ತಲಿನ ಹಳ್ಳಿ ಕಾಡುಗಳ ಸುಂದರ ಪರಿಸರದಲ್ಲೆಲ್ಲ ನಮ್ಮನ್ನೊಮ್ಮೆ ವಿಹಾರ ಮಾಡಿಸಿ ಬರುವ ಈ ಕಥೆ, ಕಣ್ಣ ಮುಂದೆಯೇ ಈ ಘಟನೆಗಳು ಆಗುತ್ತಿವೆಯೇನೋ ಎಂಬಂತೆ ಚಿತ್ರಿಸಲಾದ ಅತ್ಯಪೂರ್ವ ನಿರೂಪಣೆಯ ವೈಖರಿ, ಪರಿಸರ ವಿಜ್ಞಾನವನ್ನು ಕೂಡಿಕೊಂಡ ತೇಜಸ್ವಿಯವರ ಅಮೋಘ ಕಲ್ಪನೆ - ವರ್ಣನಾತೀತ!
ಹೀಗೆ ತುಂಬಾ ಇಷ್ಟಪಟ್ಟು ಕರ್ವಾಲೊ ಕಾದಂಬರಿ ಓದಿ..‌.ಅಲ್ಲಲ್ಲ, ಕೇಳಿ ಮುಗಿಸಿದೆ. ಉಮೇಶ್ ಎಸ್. ಎಸ್. ಅವರ ಅಚ್ಚುಕಟ್ಟಾದ, ಸ್ಪಷ್ಟ ವಾಚನವನ್ನು ಸ್ಮರಿಸಲೇಬೇಕು. 

ಪದಗಳಲ್ಲಿ ಎಷ್ಟೇ ವರ್ಣಿಸಿದರೂ ಜಿಲೇಬಿಯ ರುಚಿ ತಿಂದ ಮೇಲೇ ತಿಳಿಯವುದಲ್ಲವೇ..? ಹಾಗಾಗಿ, ನೀವೂ ಇದುವರೆಗೆ ಓದಿರದಿದ್ದರೆ ಪುರ್ಸೊತ್ತು ಮಾಡಿ ಓದಿ ನೋಡಿ, ಒಮ್ಮೆ ಬೇರೆಯೇ ಒಂದು ಲೋಕಕ್ಕೆ ಹೋಗಿಬರೋಣ....

Comments

Post a Comment

Popular posts from this blog

ಪುಟ್ಟ ಪುಟ್ಟ ಕ್ಷಣಗಳ ಆನಂದದಿ ಕಳೆಯುತಾ..

'ಸಮಯ' ಬಹು ಅಮೂಲ್ಯ!  ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨  ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು!  ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!!  ಅವರ ಜೊತೆಗೆ ನಮ್ಮ ಸೃಜನಶೀಲತೆಯೂ  ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ.. ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ !!  ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ.  ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು..  ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್...

ಜಗವೆಂಬ ರಂಗಭೂಮಿ!

ಈ ಜಗವೊಂದು ನಾಟಕ ರಂಗ, ಪ್ರತಿ ಜೀವಿಗೂ ದೇವನಿತ್ತಹನು ಪಾತ್ರವ!  ಇಲ್ಲಿ ಒಬ್ಬರಂತಿನ್ನೊಬ್ಬರಿಲ್ಲ; ಜಗವೇ ಒಂದು ರಂಗು ರಂಗಿನ ಭೂಮಿಯಾದರೆ, ಅದರೊಳು ಕೋಟಿ ನಾಟಕಗಳು! ಇಲ್ಲಿ, ಪ್ರತಿಯೊಬ್ಬ ಪಾತ್ರಧಾರಿಯ ಹಣೆ ಬರಹವೂ ವಿಧಿ ವಿರಚಿತ; ಬ್ರಹ್ಮನಾಟದಿ ನಾವೆಲ್ಲ ಆತನಾಡಿಸಿದಂತೆ ಆಡುವ ಗೊಂಬೆಗಳು! ಒಳಿತು-ಕೆಡುಕುಗಳ ಮಿಶ್ರಭಾವವನು ಒಳಗೊಂಡ ರಂಗಸ್ಥಳವಿದು; ಈ "ಜೀವನಾಟಕ" ದಿ ತಿರುವುಗಳು ಸಹಸ್ರಾರು.. ಮಿಥ್ಯೆಯ ಮಾಯೆಯೊಡನೆ ನಿಜದ ಕೀಮತ್ತು ಕಡಿಮೆಯಾಗಿ ಕಾಣದಿರದು.. ಅದೇನೇ ಇರಲಿ, ಅದೇನೇ ಬರಲಿ, ಕಟ್ಟಕಡೆಯ ಜಯ, ಒಳಿತಿಗೇ, ನಿತ್ಯಸತ್ಯಕೇ! ಬದಲಾಗುತಿದೆ ಈ ಬದುಕು;  ದಿನ-ದಿನ, ಕ್ಷಣ ಕ್ಷಣಕೂ.. ಸೃಷ್ಟಿಯ ಸುಂದರ ಉಡುಗೊರೆಯಾದ ಈ ಬದುಕನು, ಹೂವಿನಂತೆ ಮಧುರವಾಗಿ ಬಾಳಿ ಸಾರ್ಥಕ್ಯ ಪಡೆಯೋಣ! ~ 'ಶ್ರೀಪದ'