Skip to main content

Posts

Showing posts with the label ಜೀವನ

ಜಗವೆಂಬ ರಂಗಭೂಮಿ!

ಈ ಜಗವೊಂದು ನಾಟಕ ರಂಗ, ಪ್ರತಿ ಜೀವಿಗೂ ದೇವನಿತ್ತಹನು ಪಾತ್ರವ!  ಇಲ್ಲಿ ಒಬ್ಬರಂತಿನ್ನೊಬ್ಬರಿಲ್ಲ; ಜಗವೇ ಒಂದು ರಂಗು ರಂಗಿನ ಭೂಮಿಯಾದರೆ, ಅದರೊಳು ಕೋಟಿ ನಾಟಕಗಳು! ಇಲ್ಲಿ, ಪ್ರತಿಯೊಬ್ಬ ಪಾತ್ರಧಾರಿಯ ಹಣೆ ಬರಹವೂ ವಿಧಿ ವಿರಚಿತ; ಬ್ರಹ್ಮನಾಟದಿ ನಾವೆಲ್ಲ ಆತನಾಡಿಸಿದಂತೆ ಆಡುವ ಗೊಂಬೆಗಳು! ಒಳಿತು-ಕೆಡುಕುಗಳ ಮಿಶ್ರಭಾವವನು ಒಳಗೊಂಡ ರಂಗಸ್ಥಳವಿದು; ಈ "ಜೀವನಾಟಕ" ದಿ ತಿರುವುಗಳು ಸಹಸ್ರಾರು.. ಮಿಥ್ಯೆಯ ಮಾಯೆಯೊಡನೆ ನಿಜದ ಕೀಮತ್ತು ಕಡಿಮೆಯಾಗಿ ಕಾಣದಿರದು.. ಅದೇನೇ ಇರಲಿ, ಅದೇನೇ ಬರಲಿ, ಕಟ್ಟಕಡೆಯ ಜಯ, ಒಳಿತಿಗೇ, ನಿತ್ಯಸತ್ಯಕೇ! ಬದಲಾಗುತಿದೆ ಈ ಬದುಕು;  ದಿನ-ದಿನ, ಕ್ಷಣ ಕ್ಷಣಕೂ.. ಸೃಷ್ಟಿಯ ಸುಂದರ ಉಡುಗೊರೆಯಾದ ಈ ಬದುಕನು, ಹೂವಿನಂತೆ ಮಧುರವಾಗಿ ಬಾಳಿ ಸಾರ್ಥಕ್ಯ ಪಡೆಯೋಣ! ~ 'ಶ್ರೀಪದ'