ಈ ಜಗವೊಂದು ನಾಟಕ ರಂಗ,
ಪ್ರತಿ ಜೀವಿಗೂ ದೇವನಿತ್ತಹನು ಪಾತ್ರವ!
ಇಲ್ಲಿ ಒಬ್ಬರಂತಿನ್ನೊಬ್ಬರಿಲ್ಲ;
ಜಗವೇ ಒಂದು ರಂಗು ರಂಗಿನ ಭೂಮಿಯಾದರೆ,
ಅದರೊಳು ಕೋಟಿ ನಾಟಕಗಳು!
ಇಲ್ಲಿ, ಪ್ರತಿಯೊಬ್ಬ ಪಾತ್ರಧಾರಿಯ ಹಣೆ ಬರಹವೂ ವಿಧಿ ವಿರಚಿತ;
ಬ್ರಹ್ಮನಾಟದಿ ನಾವೆಲ್ಲ ಆತನಾಡಿಸಿದಂತೆ ಆಡುವ ಗೊಂಬೆಗಳು!
ಒಳಿತು-ಕೆಡುಕುಗಳ ಮಿಶ್ರಭಾವವನು ಒಳಗೊಂಡ ರಂಗಸ್ಥಳವಿದು;
ಈ "ಜೀವನಾಟಕ" ದಿ ತಿರುವುಗಳು ಸಹಸ್ರಾರು..
ಮಿಥ್ಯೆಯ ಮಾಯೆಯೊಡನೆ ನಿಜದ ಕೀಮತ್ತು ಕಡಿಮೆಯಾಗಿ ಕಾಣದಿರದು..
ಅದೇನೇ ಇರಲಿ, ಅದೇನೇ ಬರಲಿ,
ಕಟ್ಟಕಡೆಯ ಜಯ, ಒಳಿತಿಗೇ, ನಿತ್ಯಸತ್ಯಕೇ!
ಬದಲಾಗುತಿದೆ ಈ ಬದುಕು;
ದಿನ-ದಿನ, ಕ್ಷಣ ಕ್ಷಣಕೂ..
ಸೃಷ್ಟಿಯ ಸುಂದರ ಉಡುಗೊರೆಯಾದ ಈ ಬದುಕನು, ಹೂವಿನಂತೆ ಮಧುರವಾಗಿ ಬಾಳಿ ಸಾರ್ಥಕ್ಯ ಪಡೆಯೋಣ!
~ 'ಶ್ರೀಪದ'
ವಾವ್ ಸೂಪರ್
ReplyDeleteಧನ್ಯವಾದ ಮಾವ
Delete