Skip to main content

Posts

Showing posts with the label ಶ್ರೀಪದ

ಆದಿಕವಿಗರ್ಪಣೆ...

ರತ್ನಾಕರನೆಂಬ ಕಡು ನಿರ್ದಯಿಯಾಗಿ ಬೆಳೆದು, ನಾರದ ಮುನಿಗಳಿಂದ ಪರಿವರ್ತಿತರಾಗಿ,  ರಾಮ ಮಂತ್ರವ ಹಿಂದುಮುಂದಾಗಿ ಪಠಿಸುತ್ತಲೇ ಜೀವನವನ್ನು ಪಾವನವಾಗಿಸಿಕೊಂಡ,  ಆದಿಕಾವ್ಯವ ಜಗಕ್ಕೆ ನೀಡಿದ,  ಗರ್ಭವತಿ ಸೀರಜಾತೆಗೆ ಆಶ್ರಯವ ನೀಡಿ ಪಿತನಂತೆ ಸಲಹಿದ, ಮಹಾಮಹಿಮ ಮಹರ್ಷಿ ವಾಲ್ಮೀಕಿಗಳು..  ಅದೆಷ್ಟು ಕಠೋರ ಹೃದಯ! ರತ್ನಾಕರನೆಂಬ ಹೆಸರು ಕೇಳಿದರೇ ಬೆಚ್ಚಿ ಹೋಗುವಷ್ಟು! ಕಾಡದಾರಿಯಲ್ಲಿ ಬರುವ ಜನರಿಗೆ ಭೀತಿ ಹುಟ್ಟಿಸಿ ಸುಲಭವಾಗಿ ಅವರ ಬಳಿಯಿದ್ದುದನೆಲ್ಲಾ ಸುಲಿದು, ತಾನೇನೋ ಆರಾಮವಾಗಿ ಪಾಪ ಕಟ್ಟಿಕೊಳ್ಳುತ್ತಿದ್ದ. ಹೆಸರಿಗೆ, ಮಾಡುವುದು ಯಾರ ಸಲುವಾಗಿ? ತನ್ನವರಿಗಾಗಿ!  ಅಲ್ಲಿಗೆ, ಸದಾ ನಾರಾಯಣನ ನಾಮಧ್ಯಾನ ಮಾಡುವ ನಾರದ ಮುನಿಗಳ ಭೇಟಿ! ತನ್ನವರಿಗಾಗಿ ಇದನ್ನೆಲ್ಲಾ ಮಾಡುತ್ತಿರುವೆನೆಂದು ಅಷ್ಟು ಗಡದ್ದಾಗಿ ಹೇಳುತ್ತಿರುವೆಯೆಲ್ಲಾ, ನೀನು ಮಾಡಿದ ಈ ಪಾಪಗಳಲ್ಲಿ ನಿನ್ನವರೆಷ್ಟು ಪಾಲನ್ನು ಹೊರುತ್ತಾರೆ? ಎಂದು ಮುಹರ್ಷಿ ನಾರದರು ಕೇಳಿದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ, ಅದು ಹೇಗೆ ಅವರ ಬಾಳಿನ ದಿಕ್ಕನ್ನೇ ಸಂಪೂರ್ಣ ಬದಲಾಯಿಸಿಬಿಟ್ಟಿತು!! ರಾಮಲೀಲಿಯೇ ಸರಿ.  'ರಾಮ' ಎಂದು ಸರಿಯಾಗಿ ಉಚ್ಛರಿಸಲರಿಯದಷ್ಟೂ ತುಂಬಿಕೊಂಡಿದ್ದ ಪಾಪವು, ರಾಮಧ್ಯಾನಮಾತ್ರದಿಂದಲೇ ಸಂಪೂರ್ಣ ನಶಿಸಿ ಪುಣ್ಯಾತ್ಮರೇ ಆಗಿ ಜಗತ್ತಿಗೇ ಮಹಾಕಾವ್ಯವ ನೀಡುವಂತಾಯಿತು ಮಹರ್ಷಿ ವಾಲ್ಮೀಕಿಗಳು. ತನ್ನ ತನುವನ್ನೇ ಹುತ್ತವಾವರಿಸಿಕೊಂ...

ಜಗವೆಂಬ ರಂಗಭೂಮಿ!

ಈ ಜಗವೊಂದು ನಾಟಕ ರಂಗ, ಪ್ರತಿ ಜೀವಿಗೂ ದೇವನಿತ್ತಹನು ಪಾತ್ರವ!  ಇಲ್ಲಿ ಒಬ್ಬರಂತಿನ್ನೊಬ್ಬರಿಲ್ಲ; ಜಗವೇ ಒಂದು ರಂಗು ರಂಗಿನ ಭೂಮಿಯಾದರೆ, ಅದರೊಳು ಕೋಟಿ ನಾಟಕಗಳು! ಇಲ್ಲಿ, ಪ್ರತಿಯೊಬ್ಬ ಪಾತ್ರಧಾರಿಯ ಹಣೆ ಬರಹವೂ ವಿಧಿ ವಿರಚಿತ; ಬ್ರಹ್ಮನಾಟದಿ ನಾವೆಲ್ಲ ಆತನಾಡಿಸಿದಂತೆ ಆಡುವ ಗೊಂಬೆಗಳು! ಒಳಿತು-ಕೆಡುಕುಗಳ ಮಿಶ್ರಭಾವವನು ಒಳಗೊಂಡ ರಂಗಸ್ಥಳವಿದು; ಈ "ಜೀವನಾಟಕ" ದಿ ತಿರುವುಗಳು ಸಹಸ್ರಾರು.. ಮಿಥ್ಯೆಯ ಮಾಯೆಯೊಡನೆ ನಿಜದ ಕೀಮತ್ತು ಕಡಿಮೆಯಾಗಿ ಕಾಣದಿರದು.. ಅದೇನೇ ಇರಲಿ, ಅದೇನೇ ಬರಲಿ, ಕಟ್ಟಕಡೆಯ ಜಯ, ಒಳಿತಿಗೇ, ನಿತ್ಯಸತ್ಯಕೇ! ಬದಲಾಗುತಿದೆ ಈ ಬದುಕು;  ದಿನ-ದಿನ, ಕ್ಷಣ ಕ್ಷಣಕೂ.. ಸೃಷ್ಟಿಯ ಸುಂದರ ಉಡುಗೊರೆಯಾದ ಈ ಬದುಕನು, ಹೂವಿನಂತೆ ಮಧುರವಾಗಿ ಬಾಳಿ ಸಾರ್ಥಕ್ಯ ಪಡೆಯೋಣ! ~ 'ಶ್ರೀಪದ'