Skip to main content

ಅಮ್ಮ

ಕರುಳ ಬಳ್ಳಿಯ ಸಂಬಂಧ..
ಜನ್ಮದಾತೆಯ ಜೊತೆಗಿನ ಅನುಬಂಧ..
ಈ ಭಾವ-ಬಂಧವು ಅಕ್ಷರಗಳಿಗೆ ನಿಲುಕದ್ದು..
'ಅಮ್ಮ' ಎಂಬೆರಡಕ್ಷರಕೆ ಸಾಲುಗಳೇ ಸೋಲುವವು..

ನವಮಾಸ ಗರ್ಭದಿ ರಕ್ಷಿಸಿ ಎನಗೆ ಜನ್ಮವ ನೀಡ್ದೆ.. 
ನಿನ್ನ ರೂಪವನೇ ಎನಗೂ ಇತ್ತೆ..
ತ್ಯಾಗಮಯಿ ತಾಯಿ ನೀನಾದೆ..
ಏನಾದರೇನು, ಪ್ರತಿ ಬಾರಿ ನೀ ಎನ್ನೊಡನಿದ್ದೆ..
ಮೊದಲ ಗುರುವಾಗಿ ನಿನ್ನ ಸಂಸ್ಕಾರ-ನಿಷ್ಠೆಗಳ ಹಸ್ತಾಂತರಿಸಿದೆ..
ನೀನೇ ಎನ್ನ ಪ್ರೀತಿಯ ಪುಟ್ಟು ಪ್ರಪಂಚವಮ್ಮಾ..

ಅರೆಕ್ಷಣ ಜಗಳಾಡಿದರೂ ಮುನಿಸು ತೋರದೆ ಕ್ಷಮಿಸುವಾಕೆ..
ತಿಳಿಯದೆ ಮಾಡ್ವ ತಪ್ಪನ್ನೆಲ್ಲ ತಿದ್ದುವಾಕೆ..
ಸುಖ-ದುಃಖಗಳಲ್ಲಿ ನಿರತ ನನ್ನೊಡನಿರುವಾಕೆ..
ತಾನ್ಪಟ್ಟ ಕಷ್ಟಗಳ ತನ್ನ ಮಗುವು ಕಾಣಬಾರದೆಂದು ಬಯಸುವಾಕೆ..

ನೀನಿರದೆ ನಾನೆಲ್ಲಿ!?

ಅಮ್ಮಾ.....
ಎನಗೆ,
ನೀ ಹಾಡುವ ಮಧುರ ಪದ್ಯಗಳ ಕೇಳುವಾಸೆ.. 
ಈ ದಿನದ ಆಗು-ಹೋಗುಗಳ ಕುರಿತು ನಿನಗ್ಹೇಳುವಾಸೆ.. 
ನಮ್ಮಿಬ್ಬರದೇ ಪ್ರಪಂಚದ ಕುರಿತು ಕ್ಷಣಕಾಲ ಚರ್ಚಿಸುವಾಸೆ..
 ನಿನ್ನ ಮಮತೆಯ ಮಡಿಲಲ್ಲಿ ಪುಟ್ಟ ಕಂದನಾಗಿ ಮಲಗುವಾಸೆ...

ನಿನ್ನ ಒಡಲದು ಭಾವದ ಕಡಲಮ್ಮಾ..

ಎನಗೆ ಜನ್ಮವಿತ್ತ ಜನನಿ ನಿನಗೆ ಜನುಮದಿನದ ಶುಭಾಶಯ❤️
          
                        ಇಂತಿ ನಿನ್ನ ಪುಟ್ಟು

- ಶ್ರೀಪದ

Comments

  1. ಭಾವ ತುಂಬಿ ಬಂತು...

    ReplyDelete
  2. ಸೂಪರ್ ಪುಟ್ಟೂ...ಭಾವಪೂರ್ಣ ಬರಹ...
    ಶುಭವಾಗಲಿ..

    ReplyDelete
  3. ಭಾವಪೂರ್ಣ ಬರಹ.ಶುಭವಾಗಲಿ ಅಂಕಿತಾ

    ReplyDelete
  4. This comment has been removed by the author.

    ReplyDelete
  5. ನಿನ್ನ ಭಾವ ನಮನ ಬಲು ಚಂದ ತಂಗಿ

    ReplyDelete

Post a Comment

Popular posts from this blog

ಕರ್ವಾಲೊ | ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಈ ಕಾದಂಬರಿಯ ಮೂಲಕ ಮೂಡಿಗೆರೆಯ ಪರಿಸರ-ಕಾನನಗಳ ಒಮ್ಮೆ ವಿಹರಿಸೋಣ ಬನ್ನಿ..

ಪುಸ್ತಕ: ಕರ್ವಾಲೊ  ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ  ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ.. English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ‌ ಓದಿಕೊಂಡು‌ ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ... ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ! ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ...

ಪುಟ್ಟ ಪುಟ್ಟ ಕ್ಷಣಗಳ ಆನಂದದಿ ಕಳೆಯುತಾ..

'ಸಮಯ' ಬಹು ಅಮೂಲ್ಯ!  ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨  ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು!  ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!!  ಅವರ ಜೊತೆಗೆ ನಮ್ಮ ಸೃಜನಶೀಲತೆಯೂ  ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ.. ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ !!  ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ.  ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು..  ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್...