Skip to main content

ಅಜ್ಜನ ಅಚ್ಚಳಿಯದ ನೆನಪಿನಲ್ಲಿ...

🌸12th April, 1934 - 12th December, 2002🌸       

ಇಂದು, ಸಾಹಿತ್ಯ ಶಿರೋಮಣಿ ನೀರ್ಪಾಜೆ ಭೀಮ ಭಟ್ ಅವರ 87 ನೇ ಜಯಂತ್ಯುತ್ಸವ✨

  ಅಜ್ಜ ತೀರಿಹೋದಾಗ ನನಗೆ ಎರಡೇ ವರ್ಷ!! ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂಥರಾ ಅಚ್ಚಳಿಯದ ಅಜ್ಜನ ನೆನಪು..

ನಾ ಪುಟ್ಟವಳಿದ್ದಾಗ "ನೀ ಬರೆಯಕ್ಕು ಪುಳ್ಳಿ...ತುಂಬಾ ಬರೆಯಕ್ಕು" ಎಂದು ನನ್ನನ್ನು ಬಳಿ ಕರೆದು ಯಾವಾಗಲೂ ಹೇಳುತ್ತಿದ್ದರೆಂದು ಎನ್ನಮ್ಮ ಈಗಲೂ ನೆನಪಿಸಿಕೊಳ್ಳುತ್ತಾರೆ.

 ಇಂದು ನಾನು ಬರವಣಿಗೆಯತ್ತ
 ಪುಟ್ಟ ಹೆಜ್ಜೆಯಿಡುತ್ತಿದ್ದೇನೆಂದರೆ, ಅದಕ್ಕೆ ಕಾರಣ ಅಜ್ಜನಿಂದಲೇ ಬಳುವಳಿಯಾಗಿ ಬಂದ 'ಸಾಹಿತ್ಯ ಪ್ರೇಮ' ಎಂದರೆ ತಪ್ಪಾಗಲಾರದೇನೋ!!

 ನೀವು ನಮ್ಮ ಮನದ ಮೂಲೆಯಲ್ಲಿ ಸದಾ ನೆಲೆಯಾಗಿರುವಿರಿ..
 ಸದಾ ನಿಮ್ಮ ಸ್ಮರಣೆಯಲ್ಲಿ....
 ನಿಮ್ಮ ಪುಳ್ಳಿ...🙏🏻🙏🏻

- ಶ್ರೀಪದ 🌸

Comments

Popular posts from this blog

ಅಮ್ಮ

ಕರುಳ ಬಳ್ಳಿಯ ಸಂಬಂಧ.. ಜನ್ಮದಾತೆಯ ಜೊತೆಗಿನ ಅನುಬಂಧ.. ಈ ಭಾವ-ಬಂಧವು ಅಕ್ಷರಗಳಿಗೆ ನಿಲುಕದ್ದು.. ' ಅಮ್ಮ ' ಎಂಬೆರಡಕ್ಷರಕೆ ಸಾಲುಗಳೇ ಸೋಲುವವು.. ನವಮಾಸ ಗರ್ಭದಿ ರಕ್ಷಿಸಿ ಎನಗೆ ಜನ್ಮವ ನೀಡ್ದೆ..  ನಿನ್ನ ರೂಪವನೇ ಎನಗೂ ಇತ್ತೆ.. ತ್ಯಾಗಮಯಿ ತಾಯಿ ನೀನಾದೆ.. ಏನಾದರೇನು, ಪ್ರತಿ ಬಾರಿ ನೀ ಎನ್ನೊಡನಿದ್ದೆ.. ಮೊದಲ ಗುರುವಾಗಿ ನಿನ್ನ ಸಂಸ್ಕಾರ-ನಿಷ್ಠೆಗಳ ಹಸ್ತಾಂತರಿಸಿದೆ.. ನೀನೇ ಎನ್ನ ಪ್ರೀತಿಯ ಪುಟ್ಟು  ಪ್ರಪಂಚವಮ್ಮಾ.. ಅರೆಕ್ಷಣ ಜಗಳಾಡಿದರೂ ಮುನಿಸು ತೋರದೆ ಕ್ಷಮಿಸುವಾಕೆ.. ತಿಳಿಯದೆ ಮಾಡ್ವ ತಪ್ಪನ್ನೆಲ್ಲ ತಿದ್ದುವಾಕೆ.. ಸುಖ-ದುಃಖಗಳಲ್ಲಿ ನಿರತ ನನ್ನೊಡನಿರುವಾಕೆ.. ತಾನ್ಪಟ್ಟ ಕಷ್ಟಗಳ ತನ್ನ ಮಗುವು ಕಾಣಬಾರದೆಂದು ಬಯಸುವಾಕೆ.. ನೀನಿರದೆ ನಾನೆಲ್ಲಿ!? ಅಮ್ಮಾ..... ಎನಗೆ, ನೀ ಹಾಡುವ ಮಧುರ ಪದ್ಯಗಳ ಕೇಳುವಾಸೆ..  ಈ ದಿನದ ಆಗು-ಹೋಗುಗಳ ಕುರಿತು ನಿನಗ್ಹೇಳುವಾಸೆ..  ನಮ್ಮಿಬ್ಬರದೇ ಪ್ರಪಂಚದ ಕುರಿತು ಕ್ಷಣಕಾಲ ಚರ್ಚಿಸುವಾಸೆ..  ನಿನ್ನ ಮಮತೆಯ ಮಡಿಲಲ್ಲಿ ಪುಟ್ಟ ಕಂದನಾಗಿ ಮಲಗುವಾಸೆ... ನಿನ್ನ ಒಡಲದು ಭಾವದ ಕಡಲಮ್ಮಾ.. ಎನಗೆ ಜನ್ಮವಿತ್ತ ಜನನಿ ನಿನಗೆ ಜನುಮದಿನದ ಶುಭಾಶಯ ❤️                                    ಇಂತಿ ನಿನ್ನ ಪುಟ್ಟು - ಶ್ರೀಪದ

An unread notification!

Dear Almighty.. In praying you, she spent day n night yet, received no fruit! Oh there! I said, 'Your ambition must have been an unread notification!' Not to worry, he will clear that all the way; just like we do in the chats! For, he is the creator of pathway, to our ultimate destiny, Deepss !! - Anki

ಪುಟ್ಟ ಪುಟ್ಟ ಕ್ಷಣಗಳ ಆನಂದದಿ ಕಳೆಯುತಾ..

'ಸಮಯ' ಬಹು ಅಮೂಲ್ಯ!  ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨  ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು!  ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!!  ಅವರ ಜೊತೆಗೆ ನಮ್ಮ ಸೃಜನಶೀಲತೆಯೂ  ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ.. ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ !!  ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ.  ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು..  ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್...