'ಸಮಯ' ಬಹು ಅಮೂಲ್ಯ! ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨ ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು! ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!! ಅವರ ಜೊತೆಗೆ ನಮ್ಮ ಸೃಜನಶೀಲತೆಯೂ ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ.. ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ !! ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ. ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು.. ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್...
an unknown journey towards the destiny...