ಪುಸ್ತಕ: ಕರ್ವಾಲೊ ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ.. English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ ಓದಿಕೊಂಡು ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ... ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ! ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ...
an unknown journey towards the destiny...