ರತ್ನಾಕರನೆಂಬ ಕಡು ನಿರ್ದಯಿಯಾಗಿ ಬೆಳೆದು, ನಾರದ ಮುನಿಗಳಿಂದ ಪರಿವರ್ತಿತರಾಗಿ, ರಾಮ ಮಂತ್ರವ ಹಿಂದುಮುಂದಾಗಿ ಪಠಿಸುತ್ತಲೇ ಜೀವನವನ್ನು ಪಾವನವಾಗಿಸಿಕೊಂಡ, ಆದಿಕಾವ್ಯವ ಜಗಕ್ಕೆ ನೀಡಿದ, ಗರ್ಭವತಿ ಸೀರಜಾತೆಗೆ ಆಶ್ರಯವ ನೀಡಿ ಪಿತನಂತೆ ಸಲಹಿದ, ಮಹಾಮಹಿಮ ಮಹರ್ಷಿ ವಾಲ್ಮೀಕಿಗಳು.. ಅದೆಷ್ಟು ಕಠೋರ ಹೃದಯ! ರತ್ನಾಕರನೆಂಬ ಹೆಸರು ಕೇಳಿದರೇ ಬೆಚ್ಚಿ ಹೋಗುವಷ್ಟು! ಕಾಡದಾರಿಯಲ್ಲಿ ಬರುವ ಜನರಿಗೆ ಭೀತಿ ಹುಟ್ಟಿಸಿ ಸುಲಭವಾಗಿ ಅವರ ಬಳಿಯಿದ್ದುದನೆಲ್ಲಾ ಸುಲಿದು, ತಾನೇನೋ ಆರಾಮವಾಗಿ ಪಾಪ ಕಟ್ಟಿಕೊಳ್ಳುತ್ತಿದ್ದ. ಹೆಸರಿಗೆ, ಮಾಡುವುದು ಯಾರ ಸಲುವಾಗಿ? ತನ್ನವರಿಗಾಗಿ! ಅಲ್ಲಿಗೆ, ಸದಾ ನಾರಾಯಣನ ನಾಮಧ್ಯಾನ ಮಾಡುವ ನಾರದ ಮುನಿಗಳ ಭೇಟಿ! ತನ್ನವರಿಗಾಗಿ ಇದನ್ನೆಲ್ಲಾ ಮಾಡುತ್ತಿರುವೆನೆಂದು ಅಷ್ಟು ಗಡದ್ದಾಗಿ ಹೇಳುತ್ತಿರುವೆಯೆಲ್ಲಾ, ನೀನು ಮಾಡಿದ ಈ ಪಾಪಗಳಲ್ಲಿ ನಿನ್ನವರೆಷ್ಟು ಪಾಲನ್ನು ಹೊರುತ್ತಾರೆ? ಎಂದು ಮುಹರ್ಷಿ ನಾರದರು ಕೇಳಿದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ, ಅದು ಹೇಗೆ ಅವರ ಬಾಳಿನ ದಿಕ್ಕನ್ನೇ ಸಂಪೂರ್ಣ ಬದಲಾಯಿಸಿಬಿಟ್ಟಿತು!! ರಾಮಲೀಲಿಯೇ ಸರಿ. 'ರಾಮ' ಎಂದು ಸರಿಯಾಗಿ ಉಚ್ಛರಿಸಲರಿಯದಷ್ಟೂ ತುಂಬಿಕೊಂಡಿದ್ದ ಪಾಪವು, ರಾಮಧ್ಯಾನಮಾತ್ರದಿಂದಲೇ ಸಂಪೂರ್ಣ ನಶಿಸಿ ಪುಣ್ಯಾತ್ಮರೇ ಆಗಿ ಜಗತ್ತಿಗೇ ಮಹಾಕಾವ್ಯವ ನೀಡುವಂತಾಯಿತು ಮಹರ್ಷಿ ವಾಲ್ಮೀಕಿಗಳು. ತನ್ನ ತನುವನ್ನೇ ಹುತ್ತವಾವರಿಸಿಕೊಂ...
an unknown journey towards the destiny...